ಸುಜನ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್.ಲೋಕೇಶ್(ಚಿಕ್ಕ ಬೇಗೂರು) ಅವರು ನಿರ್ಮಿಸಿರುವ ‘... ರೆ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸುನೀಲ್ಕುಮಾರ್ ದೇಸಾಯಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ನಿರ್ದೇಶನವಿದೆ. ಜಿ.ಎಸ್.ಭಾಸ್ಕರ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ಕುಮಾರ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ಅನಂತನಾಗ್, ಹರ್ಷಿಕಾ ಪೂಣಚ್ಚ, ಸುಮನ್(ಹೊಸ ಪರಿಚಯ), ಲೋಕನಾಥ್, ಶಿವರಾಂ, ರಮೇಶ್ಭಟ್, ಶರತ್ ಲೋಹಿತಾಶ್ವ, ಜಿ.ಕೆ.ಗೋವಿಂದರಾವ್, ರಮೇಶ್ ಭಟ್, ಶ್ರೀನಿವಾಸಪ್ರಭು, ಚಿ.ಗುರುದತ್, ಮನದೀಪ್ ರಾಯ್, ಪ್ರಶಾಂತ್, ಚಿದಾನಂದ್ ಮುಂತಾದವರಿದ್ದಾರೆ.